ಗೋಣಿಕೊಪ್ಪಲು.ಆ.17: ಗೋಣಿಕೊಪ್ಪಲುವಿನ ದಸರಾ ನಾಡ ಹಬ್ಬ ಸಮಿತಿಯ ವತಿಯಿಂದ ಗಣ ಹೋಮ ಕಾರ್ಯಕ್ರಮವು ಸಮಿತಿಯ ಸಭಾಂಗಣದಲ್ಲಿ ನಡೆಯಿತು.
ನವರಾತ್ರಿ ದಿನದಂದು ಸ್ತಬ್ಧ ಚಿತ್ರ ಮೆರವಣಿಗೆ ಮೂಲಕ ಗಮನ ಸೆಳೆಯುತ್ತಿದ್ದ ಈ ಸಮಿತಿಯು ಸತತ 28 ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುವ ಕಾರ್ಯಕ್ರಮ ನಡೆಸುತ್ತಿದ್ದ ಸಮಿತಿಯು ಈ ಬಾರಿ ಕೊರೊನಾದಿಂದಾಗಿ ಕಾರ್ಯಕ್ರಮ ನಡೆಸಲಾಗುತ್ತಿಲ್ಲವೆಂದು ಸಮಿತಿಯ ಗೌರವ ಅಧ್ಯಕ್ಷರಾದ ಪ್ರಭಾಕರ್ ನೆಲ್ಲಿತ್ತಾಯ ಅಭಿಪ್ರಾಯ ಹಂಚಿಕೊಂಡರು.
ಸಮಿತಿಯ ಅಧ್ಯಕ್ಷ ಅಜ್ಜಿಕುಟ್ಟಿರ ರಿಷಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಗೌರವ ಕಾರ್ಯದರ್ಶಿ ಕಂಜಿತಂಡ ಪ್ರವೀಣ್, ಖಜಾಂಜಿ ಅಜಿತ್, ಸದಸ್ಯರಾದ ಸುದರ್ಶನ್, ಭಾಸ್ಕರ, ರಮೇಶ್, ಸೇತುಮಣಿ, ಶ್ರೀಜಿತ್, ಮಣಿ, ಕ್ರಷ್ಣಮೇಸ್ತ್ರಿ, ನಾಗರಾಜ್, ಸುನೀಲ್, ಜಿಜೇಸ್, ಕ್ರಷಿರಾಜ್ ಮುಂತಾದವರು ಹಾಜರಿದ್ದರು.