ಕೂಡಿಗೆ, ಅ. 16: ಕೂಡಿಗೆಯ ದಂಡಿನಮ್ಮ ಮತ್ತು ಬಸವೇಶ್ವರ ಸೇವಾ ಸಮಿತಿಯ ವತಿಯಿಂದ ದಂಡಿನಮ್ಮ ದೇವಾಲಯದ ಸನ್ನಿಧಿಯಲ್ಲಿರುವ ಶಿವಲಿಂಗಕ್ಕೆ ಪಂಚಲೋಹದ ಕವಚ ಪುನರ್ ಸಮರ್ಪಣಾ ಕಾರ್ಯಕ್ರಮವು ತಾ. 17 ರಂದು (ಇಂದು) ದೇವಾಲಯ ಆವರಣದಲ್ಲಿ ನಡೆಯಲಿದೆ.
ಗಣಪೂಜಾ ಗಣಪತಿ ಹೋಮ, ದುರ್ಗಿಹೋಮ, ದೇವಿಗೆ ಅಷ್ಟಬಂಧನ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯ್ಲವೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ತಿಳಿಸಿದ್ದಾರೆ. ಮಹಿಳಾ ಸಮಿತಿ ವತಿಯಿಂದ 4ನೇ ವರ್ಷದ ನವರಾತ್ರಿ ಪೂಜಾ ಕಾರ್ಯಕ್ರಮಗಳು 17 ರಿಂದ 25 ರವರೆಗೆ ದೇವಾಲಯದ ಆವರಣದಲ್ಲಿ ನಡೆಯಲಿವೆ.