ವೀರಾಜಪೇಟೆ ವರದಿ, ಅ. 17: ಪಂಜರಪೇಟೆ ಕೊಡವಕೇರಿಯ 2020-23ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಮೇಕೇರಿರ ರವಿ ಪೆಮ್ಮಯ್ಯ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ 16ನೇ ವರ್ಷದ ಮಹಾಸಭೆಯಲ್ಲಿ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಅಲ್ಲಪಂಡ ಚಿಣ್ಣಪ್ಪ, ಕಾರ್ಯದರ್ಶಿ ಚೇಂದಂಡ ವಸಂತ್, ಕ್ರೀಡಾ ಕಾರ್ಯದರ್ಶಿ ಕಾಂಡಂಡ ರಶ್ಮಿ ಲಾಲಪ್ಪ ಹಾಗೂ ಸಮಿತಿ ಸದಸ್ಯರುಗಳಾಗಿ ಕಲಿಯಂಡ ಜಿಮ್ಮಿ ಕಾಳಪ್ಪ, ಸೋಮಯಂಡ ಪ್ರಸಾದ್, ಮುದ್ದಿಯಡ ನಾಣಯ್ಯ, ವಾಂಚಿರ ಆಶಿತ, ಪೆಬ್ಬಾಟಂಡ ಹೇಮ, ಮಳವಂಡ ಮೈನಾ, ಚೇಂದಂಡ ಗಾರಿ, ಕರವಟ್ಟಿರ ಕಾವೇರಮ್ಮ, ಮಾದೆಯಂಡ ಸಂಪಿ ಪೂಣಚ್ಟ, ವಲ್ಲಂಡ ರಘು, ಕುಟ್ಟಂಡ ಕರಣ್ ಕಾರ್ಯಪ್ಪ ಆಯ್ಕೆಯಾದರು.