ನಾಪೆÉÇೀಕ್ಲು, ಅ. 13 : ನಾಪೋಕ್ಲುವಿನಿಂದ ಮೂರ್ನಾಡಿಗೆ ಹೋಗುವ ರಸ್ತೆಯ ಹೊದ್ದೂರು ಬಳಿಯ ಮಾರಿಯಮ್ಮ ದೇವಾಲಯದ ಬಳಿಯ ಕತ್ತಲೆ ಓಣಿಯ ರಸ್ತೆಯಲ್ಲಿ ಜಲದ ಬುಗ್ಗೆ ಕಾಣಿಸಿಕೊಂಡಿರುವುದರಿಂದ ಈ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿಸಲು ಮಳೆ ಹಾನಿ ಪರಿಹಾರ ನಿಧಿಯಿಂದ ಕಾಮಗಾರಿಗೆ 1 ಕೋಟಿ ರೂಗಳು ಮಂಜೂರಾಗಿತ್ತು. ಇದರಲ್ಲಿ ರಸ್ತೆಗೆ ಕಾಂಕ್ರಿಟ್ ಮತ್ತು ದಾಂಬರಿಕರಣ ಮಾಡುವ ಸಲುವಾಗಿ ಕಾಮಾಗಾರಿಯನ್ನು ತಾ, 12 ರಂದು ಪ್ರಾರಂಭಿಸಲಾಗಿದ್ದು, ಈ ರಸ್ತೆಯಲ್ಲಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಒಂದು ತಿಂಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ಲೋಕೋಪಯೋಗಿ ಎ.ಇ.ಇ. ಸತೀಶ್ ಮನವಿ ಮಾಡಿದ್ದಾರೆ. ಕಾಮಗಾರಿಯು ತಡವಾಗಲು ಮಳೆ ಮತ್ತು ಕೋವಿಡ್ ಕಾರಣವಾಗಿದ್ದು, ಕಾಮಗಾರಿಯನ್ನು ಕೂಡಲೆ ಮುಗಿಸಲು ಕ್ರಮಕೈಗೊಳ್ಳಲಾಗುವುದು ಎಂದ ಅವರು ಮೂರ್ನಾಡುವಿಗೆ ಹೋಗುವವರು ಕೊಟ್ಟಮುಡಿ - ಕುಂಬಳದಾಳು, ಹೊದ್ದೂರು ರಸ್ತೆಗಾಗಿ ತೆರಳಲು ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ. - ದುಗ್ಗಳ.