ಅಮ್ಮತ್ತಿ, ಅ. 12: ಇಲ್ಲಿಯ ಸಂಜೀವಿನಿ ಕಾರ್ಮಾಡು ಗ್ರಾಮ ಪಂಚಾಯತಿ ಒಕ್ಕೂಟದ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಕಾಲದಲ್ಲಿ ಶಾಲೆ ತೆರೆಯದಿದ್ದರಿಂದ ಬೆಳೆದಿದ್ದ ಹುಲ್ಲು ಕಸವನ್ನು ಕಡಿದು ಸ್ವಚ್ಛ ಮಾಡಲಾಯಿತು. ಸಂಘದ ಮುಖ್ಯಸ್ಥರಾದ ಸರೋಜಿನಿ , ವಿದ್ಯಾ ಇನ್ನಿತರರು ಭಾಗವಹಿಸಿದ್ದರು.