ಮಡಿಕೇರಿ, ಅ. 12: ವೀರಾಜಪೇಟೆ ತಾಲೂಕಿನ ಚಾ.ವಿ.ಸ.ನಿ.ನಿ. ವೀರಾಜಪೇಟೆ, ಗೋಣಿಕೊಪ್ಪಲು ಉಪ-ವಿಭಾಗ ವ್ಯಾಪ್ತಿಗೊಳಪಡುವ ಗ್ರಾಹಕರು ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಬಾಕಿ ವಸೂಲಾತಿಗೆ ತಾ. 14 ರಂದು ಗೋಣಿಕೊಪ್ಪಲು, ತಾ. 15 ರಂದು ವೀರಾಜಪೇಟೆ, ತಾ. 20 ರಂದು ಸಿದ್ದಾಪುರ, ತಾ. 21 ರಂದು ಬಾಳೆಲೆ, ತಾ. 23 ರಂದು ಅಮ್ಮತ್ತಿ, ತಾ. 27 ರಂದು ಪಾಲಿಬೆಟ್ಟ ಮತ್ತು ಶ್ರೀಮಂಗಲ ಇಲ್ಲಿ ‘ವಿದ್ಯುತ್ ಬಿಲ್ಲಿನ ಕಂದಾಯ ಬಾಕಿ ಅಭಿಯಾನ’ ನಡೆಯಲಿದೆ.

ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಸೂಲಾತಿ ಕಾರ್ಯಕ್ಕೆ ನಿಯೋಜಿಸಿರುವ ಚಾ.ವಿ.ಸ.ನಿ.ನಿ. ಸಿಬ್ಬಂದಿಯವರಲ್ಲಿ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಿ ನಿಗಮದೊಂದಿಗೆ ಸಹಕರಿಸಬೇಕಾಗಿ ವಿನಂತಿಸಿದೆ. ನಿಗಮದ ನಿಯಮಾನುಸಾರ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಸ್ಥಾವರಗಳಿಗೆ ಕಡ್ಡಾಯವಾಗಿ ವಿದ್ಯುತ್ ನಿಲುಗಡೆ ಮಾಡಬೇಕಾಗುತ್ತದೆ. ಆದ್ದರಿಂದ ಗ್ರಾಹಕರು ನಿಗಮದ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಲು ಆಸ್ಪದ ನೀಡದೆ ಬಾಕಿ ಮೊತ್ತವನ್ನು ಪಾವತಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.