ಶನಿವಾರಸಂತೆ, ಅ. 11: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಲ್ಲಳ್ಳಿ, ದೊಡ್ಡಕೊಡ್ಲಿ, ಕಿರಿಕೊಡ್ಲಿ, ಹಂಪಾಪುರ, ನವಗ್ರಾಮ, ಮಸೀದಿ ಬೀದಿಯ ಅಂಗನವಾಡಿಗಳ ಸಹಭಾಗಿತ್ವದಲ್ಲಿ ಕಲ್ಲಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಡ್ಲಿಪೇಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಬಿಎಚ್‍ಇಓ ಮಂಜುಳಾ ಮಾತನಾಡಿ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳು ಸೇವಿಸಬೇಕಾದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳ ಬಗ್ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್. ಚಂದ್ರಶೇಖರ್, ವಿವಿಧ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಾದ ಪಿ.ಎಸ್. ಮಂಜುಳಾ, ಪe ರ್Áನ ಪರ್ವೀನ್, ಗುಣಮಣಿ, ಶಾರದಮ್ಮ, ನವೀನಾ, ರೆಹನಾ ಬಾನು, ಯಾಸ್ಮೀನ್ ತಾಜ್, ಆಶಾ ಕಾರ್ಯಕರ್ತೆಯರಾದ ಯಶೋಧಾ, ಕಲಾವತಿ ಹಾಗೂ ಆರ್. ವಂದನಾ ಉಪಸ್ಥಿತರಿದ್ದರು.