ಮಡಿಕೇರಿ, ಅ. 11: ಕೊಡಗು ದಂತ ವೈದ್ಯಕೀಯ ಕಾಲೇಜಿನ 2020ರ ಪದವಿ ಪ್ರದಾನ ಸಮಾರಂಭವನ್ನು ತಾ. 10ರಂದು ಹಮ್ಮಿಕೊಳ್ಳಲಾಯಿತು. ಕ್ವಾರಂಟೈನ್ ಮುಗಿಸಿದ ವಿದ್ಯಾರ್ಥಿಗಳಿಗೆ 40 ಪದವಿಗಳನ್ನು ಹಾಗೂ 35 ಸ್ನಾತಕೋತ್ತರ ಪದವಿಗಳÀನ್ನು ಪ್ರದಾನ ಮಾಡಲಾಯಿತು. (ಕೋವಿಡ್-19ರÀ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಯಿತು. ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿ ಹಾಗೂ ಪೋಷಕರಿಗೆ ಗೂಗಲ್ ಮೀಟ್ ಮೂಲಕ ಪ್ರಸಾರ ಮಾಡಲಾಯಿತು.

ಪ್ರೋ. ಡಾ. ಸುನಿಲ್ ಮುದ್ದಯ್ಯ ವಿದ್ಯಾಸಂಸ್ಥೆ ಮುಖ್ಯಸ್ಥ ಮಾತನಾಡಿ, ಕೊಡಗು ದಂತ ವೈದ್ಯಕೀಯ ಕಾಲೇಜಿನ ಬಗ್ಗೆ ಪ್ರಸ್ತಾಪಿಸುತ್ತಾ ಈ ಮೇಲ್ಕಂಡ ಕಾಲೇಜು ದಂತ ಆರೋಗ್ಯ ಕ್ಷೇತ್ರದ ಎಲ್ಲಾ 9 ವಿಭಾಗಗಳಲ್ಲೂ ಸ್ನಾತಕೋತ್ತರ ತರಬೇತಿ ಲಭ್ಯವಿರುವುದಾಗಿಯೂ ಮತ್ತು ದಂತ ವೈದ್ಯರುಗಳನ್ನು, ಉಪನ್ಯಾಸಕರುಗಳನ್ನು, ವಿಜ್ಞಾನಿ ಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಗಳಾದ ಪ್ರೋ. ಕರಭಂಡ ಇವರು ಆಲ್ ಇಂಡಿಯಾ ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಡಾ. ಸಿ.ಜಿ. ಪಂಡಿತ್ ಇಂಡಿ ಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಆನ್‍ಲೈನ್ ಮೂಲಕ ಪಾಲ್ಗೊಂಡಿದ್ದರು.

ಪ್ರೋ. ಡಾ. ಸುನಿಲ್ ಮುದ್ದಯ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಿದ್ದ ಚಿನ್ನದ ಪದಕ ವಿಜೇತರನ್ನು ಘೋಷಿಸಿದರು, ಕಂಜಿತಂಡ ಎಂ. ಕುಶಾಲಪ್ಪ ಚಿನ್ನದ ಪದಕವನ್ನು ಕೆ. ಜಾಯ್ ರವರಿಗೆ ವಿತರಿಸಿದರು. ಎಲ್ಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಮೀಸಲಿದ್ದ ಕೆ.ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಶೃಂಗಾ ಅಮೃತೇಶ್ವರಿ ಅವರಿಗೆ ವಿತರಿಸಿದರು. ಜರ್‍ನಲ್ ಆಫ್ ಮಲ್ಟಿಡಿಸಿಪ್ಲಿನರಿ ಡೆಂಟಲ್ ರೀಸರ್ಚ್‍ನ ಹೊಸ ಅವತರಿಣಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.