ಮಡಿಕೇರಿ, ಅ. 11: ನಗರದ ಹೊಟೇಲ್ ಉದ್ಯಮಿ ಹಾಗೂ ಕೃಷ್ಣಭವನ ಮಾಲೀಕರಾದ ಕೇಶವ ಅಧಿಕಾರಿ (64) ಅವರು ಅನಾರೋಗ್ಯದಿಂದ ನಿಧನರಾದರು. ಅಲ್ಲದೆ ಕನ್ನಿಕಾ ಜ್ಯುವೆಲ್ಲರಿಯ ಮಾಲೀಕರು ಹಾಗೂ ಮಹದೇವ ಪೇಟೆ ಕನ್ನಿಕಾ ಪರಮೇಶ್ವರಿ ದೇವಾಲಯದ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಕಾಂತರಾಜ್ (78) ಅವರು ನಿಧನರಾದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.