ಕಣಿವೆ, ಅ. 10: ಕಾವೇರಿ ಕಣಿವೆಯ ಪ್ರಮುಖ ಹಾರಂಗಿ ಜಲಾಶಯಕ್ಕೆ ಇನ್ನು ಮುಂದೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಕಣ್ಗಾವಲು ಇಡಲಿದೆ. ನಾಡಿ ನಾದ್ಯಂತ ಇರುವ ಜಲಾಶಯಗಳನ್ನು ಸರ್ಕಾರ ರಾಷ್ಟ್ರೀಯ ಸ್ಮಾರಕಗಳಾಗಿ ಘೋಷಿಸಿರುವ ಕಾರಣ, ಜಲಾಶಯ ಗಳಿಗೆ ವಿಶೇಷವಾದ ಭದ್ರತೆ ನೀಡುವ ಅಗತ್ಯತೆಯ ಬಗ್ಗೆ ಕಳೆದ ವಾರ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಪೆÇಲೀಸ್ ಮಹಾನಿರ್ದೇಶP ಪ್ರವೀಣ್ ಸೂದ್ ಅವರು ರಾಜ್ಯ ಆಂತರಿಕ ಭದ್ರತಾ ಪಡೆಯ ಮುಖ್ಯಸ್ಥ ಭಾಸ್ಕರ್‍ರಾವ್ ಅವರಿಗೆ ಪತ್ರ ಬರೆದು ಹಾರಂಗಿ ಜಲಾಶಯಕ್ಕೆ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸುವಂತೆ ನಿರ್ದೇಶನ ನೀಡಿದ್ದಾರೆ.ಇದೀಗ ಹಾರಂಗಿ ಜಲಾಶಯ ದಲ್ಲಿ ಕೊಡಗು ಜಿಲ್ಲೆಯ ಮೀಸಲು ಪಡೆಯ ಪೆÇಲೀಸರು ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಕೈಗಾರಿಕಾ ಭದ್ರತಾ ಪಡೆಯಲ್ಲಿ ಓರ್ವ ಸಬ್ ಇನ್ಸ್‍ಪೆಕ್ಟರ್ ಹಾಗೂ ಐವರಿಂದ ಹತ್ತು ಮಂದಿ ಸಿಬ್ಬಂದಿಗಳು ಇರಲಿದ್ದಾರೆ. ಇವರಿಗೆ ಅತ್ಯಾಧುನಿಕ ಸಶಸ್ತ್ರಗಳು, ಜಲಾಶಯದಲ್ಲಿ ಕಾರ್ಯಾಚರಣೆ ನಡೆಸಬೇಕಾದ ಸಂದರ್ಭ ಎದುರಾದರೆ ಒಂದು ವಿದ್ಯುತ್ ಚಾಲಿತ ಬೋಟ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಕರ್ಯ ಗಳನ್ನು ಒದಗಿಸ ಲಾಗುತ್ತದೆ. ಜಲಾಶಯದ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿ ಗರಿಗೆ ಹಲವು ನಿರ್ಬಂಧಗಳು ಜಾರಿಯಾಗಲಿದ್ದು, ಕೇವಲ ಜಲಾಶಯದ ಮುಂಬದಿಯ ಉದ್ಯಾನವನ, ನೀರು ಬಿಡುವ ಕ್ರೆಸ್ಟ್ ಗೇಟ್‍ಗಳವರೆಗೆ ಮಾತ್ರ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ಇರುತ್ತದೆ ಎನ್ನಲಾಗುತ್ತಿದೆ. ಉಗ್ರರ ಅಡಗುತಾಣ ವಾಗಲಿರುವ ಪಶ್ಚಿಮ ಘಟ್ಟಗಳು ಎಂಬ ಬೆಳವಣಿಗೆ ಹಿನ್ನೆಲೆಯಲ್ಲಿಯೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಎಲ್ಲಾ ಜಲಾಶಯ ಗಳಿಗೂ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೋಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.