ಮಡಿಕೇರಿ, ಅ. 10: ಮಾದಾಪುರ ಬಳಿಯ ಜಂಬೂರು ಬಾಣೆಯ ಸಂತ್ರಸ್ತರ ಫೀ.ಮಾ. ಕಾರ್ಯಪ್ಪ ಬಡಾವಣೆಯಲ್ಲಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯಿತು.

ಡಿವೈಎಸ್ಪಿ ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ಸಂತೋಷ್ ಅವರುಗಳು ಬಡಾವಣೆ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಕಾನೂನು ಸುವ್ಯವಸ್ಥೆ ಬಗ್ಗೆ ಮಾರ್ಗಸೂಚಿ ನೀಡಿದರು. ಬಡಾವಣೆಯಲ್ಲಿರುವವರು ಯಾವುದೇ ಭಿನ್ನಾಭಿಪ್ರಾಯ, ಕಲಹ ಮಾಡಿಕೊಳ್ಳದೆ ಶಾಂತಿ-ಸೌಹಾರ್ದತೆಯಿಂದ ಇರುವಂತೆ ಸೂಚನೆ ನೀಡಿದರು. ಮಾದಾಪುರ ಉಪಠಾಣೆ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಗೊಂಡಿತು. ಮಾದಾಪುರ ಸಹಾಯಕ ಠಾಣಾಧಿಕಾರಿ ಪೊನ್ನಪ್ಪ, ಸಿಬ್ಬಂದಿಗಳಿದ್ದರು.