ಸೋಮವಾರಪೇಟೆ, ಅ. 9: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.
ಐಗೂರು ವ್ಯಾಪ್ತಿಯ ಕಾಫಿ ತೋಟ, ಗದ್ದೆಗಳಲ್ಲಿ ಬೆಳೆದಿರುವ ಫಸಲನ್ನು ಬೀಡಾಡಿ ದನಗಳು ನಾಶಪಡಿಸುತ್ತಿವೆ. ಕೂಡಲೇ ಗ್ರಾಮ ಪಂಚಾಯಿತಿಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪಂಚಾಯಿತಿ ಪಿಡಿಒ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಸ್ಥಳೀಯರಾದ ಡಿ.ಎಸ್. ಚಂಗಪ್ಪ, ಡಿ.ಡಿ. ರಮೇಶ, ಕೆ.ಪಿ. ದಿನೇಶ್, ಪೂವಯ್ಯ, ಅಯ್ಯಪ್ಪ, ಡಿ.ಎಸ್. ಅಪ್ಪಯ್ಯ, ಎಂ.ಎಸ್. ತ್ರಿವರ್ಣ, ಎಂ.ಸಿ. ಸಂಜಯ್, ಡಿ.ಎಲ್. ಶಿವಣ್ಣ, ಡಿ.ಡಿ. ಬೆಳ್ಳಿಯಪ್ಪ, ಡಿ.ಕೆ. ಮೊಗಪ್ಪ ಉಪಸ್ಥಿತರಿದ್ದರು.