ಸೋಮವಾರಪೇಟೆ, ಅ. 8: ಸಮೀಪದ ಶಾಂತಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ, ಅಲ್ಲಿನ ಸಮುದಾಯ ಭವನದಲ್ಲಿ ನಡೆಯಿತು.ದೇವಾಲಯದ ಧರ್ಮದರ್ಶಿ ಮಂಡಳಿಯ ನೂತನ ಅಧ್ಯಕ್ಷರಾಗಿ ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯದರ್ಶಿಯಾಗಿ ಕೆ.ಎಸ್. ಸುಂದರ್, ಉಪಾಧ್ಯಕ್ಷರಾಗಿ ಜಿ.ಡಿ. ಬಸವರಾಜು, ಸಹ ಕಾರ್ಯದರ್ಶಿಯಾಗಿ ಎಸ್.ಆರ್. ಉತ್ತಯ್ಯ, ಖಜಾಂಚಿಯಾಗಿ ಕೆ.ಕೆ. ಮುತ್ತಣ್ಣ ಅವರುಗಳನ್ನು ಆಯ್ಕೆ ಮಾಡಲಾಯಿತು.
ಧರ್ಮದರ್ಶಿ ಮಂಡಳಿ ಸದಸ್ಯರುಗಳಾಗಿ ಕೆ.ಕೆ. ಪೊನ್ನಪ್ಪ, ಎಸ್.ಪಿ. ಗಣೇಶ್, ಕೆ.ಎಂ. ಕೊಮಾರಪ್ಪ, ಜಿ.ಡಿ. ಪ್ರಕಾಶ್, ಬಿ.ಎಂ. ಪಾಲಾಕ್ಷ, ಬಿ.ಡಿ. ನಿರಂಜನ್, ಕೆ.ಪಿ. ಚಂಗಪ್ಪ, ಸುಮಿತ್ರ, ಎನ್.ಹೆಚ್. ಗಿರೀಶ್, ಕೆ.ಪಿ. ಕುಮಾರ್, ಜಿ.ಎಸ್. ಮಧುಕುಮಾರ್, ಕೆ.ಪಿ. ಗಿರೀಶ್, ಎಸ್.ಆರ್. ತಿಲಕ್, ಕೆ.ಎಸ್. ರಮೇಶ್, ಹೆಚ್.ಎಸ್. ಪೊನ್ನಪ್ಪ, ಎನ್.ಈ. ವಿಜಯಕುಮಾರ್ ಅವರುಗಳನ್ನು ನೇಮಿಸಲಾಯಿತು. ಧರ್ಮದರ್ಶಿ ಮಂಡಳಿಗೆ ಖಾಯಂ ಆಹ್ವಾನಿತರನ್ನಾಗಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಸಮಿತಿಯ ಮಾಜೀ ಅಧ್ಯಕ್ಷರು, ಕಾರ್ಯದರ್ಶಿ, ರಥ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಯಿತು.