ಪೆÇನ್ನಂಪೇಟೆ, ಅ. 8: ಹುದಿಕೇರಿ ಹೋಬಳಿ ವ್ಯಾಪ್ತಿಯ ಬಲ್ಯ ಮಂಡೂರು ಹಾಗೂ ಬಾಡಗರಕೇರಿ ಗ್ರಾಮಗಳಲ್ಲಿ ಪೈಸಾರಿ ಕೆರೆಗಳ ಒತ್ತುವರಿಯನ್ನು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ವತಿಯಿಂದ ಜಂಟಿ ಸರ್ವೆ ನಡೆಸುವ ಮೂಲಕ ತೆರವುಗೊಳಿಸಲಾಯಿತು.

ಬಲ್ಯ ಮಂಡೂರು ಗ್ರಾಮದ ಸರ್ವೆ ನಂ. 73ರ 1.48 ಎಕರೆ ಪೈಸಾರಿ ಕೆರೆ ಹಾಗೂ ಬಾಡಗರಕೇರಿ ಗ್ರಾಮದ ಸರ್ವೆ ನಂ. 166ರ 1.44 ಎಕರೆ ಪೈಸಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡವರಿಂದ ತೆರವು ಗೊಳಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದÀರ್ಭ ಹುದಿಕೇರಿ ಕಂದಾಯ ಪರಿವೀಕ್ಷಕ ನಿಶಾನ್, ಸರ್ವೆ ಅಧಿಕಾರಿ ಶಿವಾನಂದ ರೆಡ್ಡಿ, ಬಲ್ಯಮಂಡೂರು ಪಿಡಿಓ ರಾಜೇಶ್, ಬಾಡಗರಕೇರಿ, ಪಿಡಿಓ ರವಿ, ಬಾಡಗರಕೇರಿ ಗ್ರಾಮ ಲೆಕ್ಕಿಗರಾದ ಸಂತೋಷ್ ಕುಮಾರ್ ಹಾಗೂ ಬಲ್ಯಮಂಡೂರು ಗ್ರಾಮ ಲೆಕ್ಕಿಗರಾದ ಆಶಾ ಹಾಜರಿದ್ದರು.