ಸೋಮವಾರಪೇಟೆ,ಅ.8: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಾ. 9ರಂದು (ಇಂದು) ವಾರ್ಡ್ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಪ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಪೂರ್ವಾಹ್ನ 11 ಗಂಟೆಗೆ ಹಾನಗಲ್ಲುಬಾಣೆ, 12.30 ಗಂಟೆಗೆ ಹಾನಗಲ್ಲು ಶೆಟ್ಟಳ್ಳಿಯ ಯುವಕ ಸಂಘದ ಆವರಣ, ಅಪರಾಹ್ನ 2.30ಕ್ಕೆ ಕಲ್ಕಂದೂರು ವ್ಯಾಪ್ತಿಯ ವಾರ್ಡ್ ಸಭೆ ಗ್ರಾ.ಪಂ. ಆವರಣದಲ್ಲಿ, 4 ಗಂಟೆಗೆ ಯಡೂರು ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ಸಭೆಗಳು ನಡೆಯಲಿದ್ದು, ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆ ನೀಡಬಹುದೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.