ಕುಶಾಲನಗರ ಸೋಮೇಶ್ವರ ಬಡಾವಣೆ ನಿವಾಸಿ ಉಪನ್ಯಾಸಕ ಡಾ.ಪ್ರಕಾಶ್ (42) ಅವರು ಹೃದಯಾ ಘಾತದಿಂದ ತಾ. 9ರಂದು ನಿಧನರಾದರು. ಮೃತರು ಕಳೆದ ಹಲವು ವರ್ಷಗಳ ಕಾಲ ಕೂಡಿಗೆಯ ಪಿಯು ಕಾಲೇಜು ಉಪನ್ಯಾಸಕ ರಾಗಿದ್ದು ಮುಂಬಡ್ತಿಯೊಂದಿಗೆ ಕೊಣನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆ ಗೊಂಡಿದ್ದರು. ಮೃತರು ಸುಂಟಿಕೊಪ್ಪ ಪಿಯು ಕಾಲೇಜು ಉಪನ್ಯಾಸಕಿ ಯಾಗಿರುವ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಟಹಾಕತ್ತೂರುವಿನ ಅಮ್ಮಾಟಂಡ ಅಪ್ಪಣ್ಣ (ಸನ್ನಿ-70) ತಾ. 9 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 10 ರಂದು (ಇಂದು) ಹಾಕತ್ತೂರುವಿನಲ್ಲಿ ನಡೆಯಲಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.