ಶ್ರೀಮಂಗಲ, ಅ. 9 : ಟಿ.ಶೆಟ್ಟಿಗೇರಿಯ ರಾಯಲ್ ಕ್ರಿಕೆಟ್ ಕ್ಲಬ್ ವತಿಯಿಂದ ಕೊಡಗಿನ ಕೊಡವ ಕುಟುಂಬಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಟಿ ಶೆಟ್ಟಿಗೇರಿ ಸರ್ಕಾರಿ ಶಾಲಾ ಮೈದಾನದಲ್ಲಿ ತಾ. 31ರಿಂದ ನವೆಂಬರ್ 7ರವರೆಗೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು, ಮೊದಲು ನೋಂದಾಯಿಸುವ 50 ತಂಡಗಳಿಗೆ ಮಾತ್ರ ಆದ್ಯತೆ ಇರುತ್ತದೆ. ತಂಡವನ್ನು ನೋಂದಾಯಿಸಲು ತಾ. 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 9663295456, 7022462961 ಸಂಪರ್ಕಿಸಬಹುದು.