ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳ ಹುಟ್ಟುಹಬ್ಬದ ಪ್ರಯುಕ್ತ ಈ ಧೀಮಂತ ನಾಯಕರ ಸಂಸ್ಮರಣೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಾರುತಿ ಯುವಕ ಸಂಘ: ದೊಡ್ಡಪುಲಿಕೋಟುವಿನ ಮಾರುತಿ ಯುವಕ ಸಂಘದ ವತಿಯಿಂದ ಶ್ರಮದಾನ ನಡೆಯಿತು. ಈ ಸಂದರ್ಭ ಊರಿನ ಹಿರಿಯರಾದ ಮುಕ್ಕಾಟಿರ ಜಾಲಿ ಚಿಂಗಪ್ಪ, ಸುತನ್, ಸತ್ಯ, ಲವ, ಸುಮನ್, ಬೆಲ್ಲು, ಬಿನ್ನು, ಸಂಪತ್, ರಸಿನ್, ಕರವಂಡ ಅಪ್ಪಣ್ಣ, ಲವ ನಾಣಯ್ಯ, ರವಿ, ಸಂತೋಷ್, ಮನು, ಕಿಸನ್, ದರ್ಶನ್, ಬೊಳಿಯಾಡಿರ ಬ್ರೌನ್, ಪೆÇನ್ನುಕಂಡ ಲಿಮನ್, ತೀರ್ಥ, ಮತ್ತಿತರರು ಇದ್ದರು.ನಾಪೋಕ್ಲು ಹಳೆ ತಾಲೂಕು: ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ‘ಸ್ವಚ್ಛೋತ್ಸವ-ನಿತ್ಯೋತ್ಸವ’ ಮಾಸಿಕ ಆಚರಣೆಗೆ ಸಮೀಪದ ಹಳೆ ತಾಲೂಕಿನಲ್ಲಿ ಚಾಲನೆ ನೀಡಲಾಯಿತು. ಆಟೋ ಚಾಲಕರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ ಕರುಂಬಮ್ಮಯ್ಯ ಪಾಲ್ಗೊಂಡು ಮಾತನಾಡಿ, ನಾಪೋಕ್ಲು ತ್ಯಾಜ್ಯ ಮುಕ್ತ ಗ್ರಾಮವಾಗಬೇಕು. ಗ್ರಾಮದ ಎಲ್ಲಾ ಜನರು ಮನೆ, ಅಂಗಡಿ, ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಬಿಂದುಶ್ರೀ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮದನ್, ಜೆಡಿಎಸ್ ಪ್ರಮುಖರಾದ ಮನ್ಸೂರ್ ಆಲಿ, ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅರ್. ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮೊದಲಿಗೆ ಪಿ.ಡಿ.ಒ. ಚೊಂದಕ್ಕಿಯವರು ಪ್ರಾಸ್ತವಿಕವಾಗಿ ನುಡಿದರು.
ಈ ಸಂದರ್ಭ ಹಳೆ ತಾಲೂಕಿನಿಂದ ಪಟ್ಟಣದವರೆಗೆ ಜಾಥಾ ನಡೆಸಲಾಯಿತು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಸದಸ್ಯರು, ಗ್ರ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.ಗ್ರೀನ್ ಸಿಟಿ ಫೋರಂ ಮಡಿಕೇರಿ: ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಗ್ರೀನ್ ಸಿಟಿ ಫೋರಂ ಸಂಘಟನೆ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಶ್ರಮದಾನ ಮೂಲಕ ವಿದ್ಯಾಸಂಸ್ಥೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿ ಕಡಿದು ಸ್ವಚ್ಛಗೊಳಿಸಲಾಯಿತು.
ಶ್ರಮದಾನಕ್ಕೂ ಮುನ್ನ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ನಿರ್ದೇಶಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ವ್ಯಾಂಡಮ್ ದಾಮೋದರ್, ಜೀವವಿಮಾ ಪ್ರತಿನಿಧಿಗಳಾದ ಗೀತಾ ಗಿರೀಶ್, ಪದ್ಮನಾಭ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿಜಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಶಿವರಾಮ್, ಬಿಆರ್ಸಿಗಳಾದ ವೀಣಾ ರೈ, ರಾಮಚಂದ್ರ, ರಂಜಿತ್ ಮತ್ತಿತರರು ಇದ್ದರು.ಕಡಂಗ: ಕಡಂಗ ಸಮೀಪದ ಎಡಪಾಲದಲ್ಲಿ ಮಹಾತ್ಮ ಗಾಂಧೀಜಿಯ ಜನ್ಮ ದಿನದ ಪ್ರಯುಕ್ತ ಹಾಗೂ ವಿಖಾಯ ದಿನದ ಪ್ರಯುಕ್ತ ಎಡಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಸುತ್ತಮುತ್ತ SಏSSಈ ಎಡಪಾಲ ಸ್ವಯಂ ಸೇವಕ ವಿಭಾಗದ ವಿಖಾಯ ಕಾರ್ಯಕರ್ತರು ಹನೀಫ ಎರಟೆಂಡ ನೇತೃತ್ವದಲ್ಲಿ ಕಾಡುಗಳನ್ನು ಕಡಿದು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಎಡಪಾಲ ಶಾಖೆಯ ಕಾರ್ಯಕರ್ತರಾದ ಹಾರಿಸ್ ಬಾಖವಿ, ಅಸ್ಲಮ್, ಅಫ್ರೀದ್, ಯಾಸೀನ್ ಮಹರೂಫ್, ಸಲಾಹುದೀನ್, ಸಹದ್ ಶಫೀಕ್, ಖಲೀಲ್, ಸಿಯಾಬ್ ಪಾಲ್ಗೊಂಡಿದ್ದರು.ಹಿಂದೂ ರುಧ್ರಭೂಮಿ ಸ್ವಚ್ಛತೆ: ಭಜರಂಗ ದಳದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಾಪೆÉÇೀಕ್ಲು ಹಿಂದೂ ರುಧ್ರಭೂಮಿಯ ಸುತ್ತಮುತ್ತ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು. ಮಾತನಾಡಿದ ಭಜರಂಗ ದಳದ ಅಧ್ಯಕ್ಷ ಬಿ.ಎಂ. ಪ್ರತೀಪ್ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನದ ಪ್ರಯುಕ್ತ ಶ್ರಮದಾನವನ್ನು ಹಮ್ಮಿಕೊಂಡು ಗಾಂಧೀಜಿಯವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು.