ಭಾಗಮಂಡಲ, ಅ. 8: ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‍ನ ಎಂಟನೇ ಎಟಿಎಂ ಮಳಿಗೆಯನ್ನು ಚೇರಂಬಾಣೆ ಶಾಖೆಯಲ್ಲಿ ಇಂದು ಉದ್ಘಾಟಿಸ ಲಾಯಿತು. ಕೊಡಗು ಜಿಲ್ಲಾ ಸಹಾಕಾರ ಬ್ಯಾಂಕ್ ಅಧ್ಯಕ್ಷ್ಷ ಕೊಡಂದೇರ ಪಿ. ಗಣಪತಿ ಉದ್ಟಾಟಿಸಿ ಗ್ರಾಹಕರಿಗೆ ನೀಡುವ ಸಾಲವನ್ನು ರುಪೇಕಾರ್ಡ್ ಮುಖಾಂತರ ಪಡೆಯಲು ಅಲ್ಲದೇ ಪ್ರವಾಸಿಗರಿಗೂ ಕೂಡ ಅನುಕೂಲ ಆಗುವ ನಿಟ್ಟಿನಲ್ಲಿ ಮಳಿಗೆ ತೆರೆಯಲಾಗಿದೆ; ಬ್ಯಾಂಕ್‍ಗೆ ಗ್ರಾಹಕರ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭ ನಿರ್ದೇಶಕರಾದ ಜಗದೀಶ್, ಹೊಸೂರು ಸತೀಶ್ ಕುಮಾರ್, ಸಂಪತ್, ಸ್ಥಳೀಯ ಸಹಕಾರ ಸಂಘಗಳ ಅಧ್ಯಕ್ಷರುಗಳಾದ ಸುಮನ್, ರ್ಯಾಲಿ ಮಾದಯ್ಯ, ತಳೂರು ಕಿಶೋರ್ ಕುಮಾರ್, ಕೀರ್ತಿ ಕುಮಾರ್, ಬ್ಯಾಂಕ್‍ನ ವ್ಯವಸ್ಥಾಪಕರಾದ ರತ್ನ ಬಿ.ಎಮ್. ಹಾಗೂ ಪೂವಯ್ಯ, ಗ್ರಾಹಕರು ಪಾಲ್ಗೊಂಡಿದ್ದರು.