ಗುಡ್ಡೆಹೊಸೂರು, ಅ. 9: ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿ ಶ್ಯಾಂ ತಮ್ಮಯ್ಯ ಮತ್ತು ಸಿಬ್ಬಂದಿ ಕೌಶಿಕ್ ಅವರುಗಳು ಗುಡ್ಡೆಹೊಸೂರಿನ ವಿವಿಧ ಭಾಗಗಳಿಗೆ ತೆರಳಿ ಮಾಸ್ಕ್ ಧರಿಸದೆ ಇರುವ ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ದಂಡ ಹಾಕಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.

ಜನನಿಬಿಡ ಪ್ರದೇಶದಲ್ಲಿ ಮುಂದೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಅಳವಡಿಸುವಂತೆ ಪಿ.ಡಿ.ಓ. ಶ್ಯಾಂ ಈ ಸಂದರ್ಭ ಹೇಳಿದರು.