-
ಸೋಮವಾರಪೇಟೆ, ಅ. 9: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಬೂತ್ಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಕ್ತಿ ಕೇಂದ್ರದ ಪ್ರಮುಖರಾದ ಹೆಚ್.ಎಂ. ಸುಧೀರ್ ವಹಿಸಿದ್ದರು. ಕಿರಗಂದೂರು ಬೂತ್ ಸಮಿತಿ ಅಧ್ಯಕ್ಷರನ್ನಾಗಿ ಕೆ.ಪಿ. ರೋಷನ್, ಕಾರ್ಯದರ್ಶಿಯಾಗಿ ಎಸ್.ಈ. ಸುದೀಪ್ ಅವರುಗಳನ್ನು ನೇಮಕಗೊಳಿಸಲಾಯಿತು. ಸಭೆಯಲ್ಲಿ ಶಕ್ತಿ ಕೇಂದ್ರದ ಉಪ ಪ್ರಮುಖರಾದ ಸುಮಂತ್ ಹಾಗೂ ಯುವ ಮೋರ್ಚಾ ಕೀರ್ತಿ ಪೊನ್ನಪ್ಪ, ಹಿರಿಯ ಕಾರ್ಯಕರ್ತರಾದ ಎಸ್.ಎಂ. ಪೂವಯ್ಯ, ತಮ್ಮಯ್ಯ, ಕೃಪಾಲ್, ಶಿವಕುಮಾರ್, ಎಸ್.ಕೆ. ಪೂವಯ್ಯ, ಚಿದಾನಂದ, ಚಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಿಳಿಗೇರಿ: ಬಿಳಿಗೇರಿ ಬೂತ್ ಸಮಿತಿಯ ಅಧ್ಯಕ್ಷರನ್ನಾಗಿ ಬಿ.ಕೆ. ರಮೇಶ್, ಕಾರ್ಯದರ್ಶಿಯಾಗಿ ಬಿ.ಎಂ. ಸುಬ್ರಮಣಿ ಅವರನ್ನು ನೇಮಿಸಲಾಯಿತು.
ತಾಕೇರಿ: ತಾಕೇರಿ-1ರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರನ್ನಾಗಿ ಜಿ.ಎಸ್. ರಾಜಕುಮಾರ್, ಕಾರ್ಯದರ್ಶಿಯಾಗಿ ಎಸ್.ಎಂ. ರಾಜಪ್ಪ, ಬೂತ್-2ರ ಅಧ್ಯಕ್ಷರನ್ನಾಗಿ ಎಂ.ಕೆ. ಕೌಶಿಕ್ ಹಾಗೂ ಕಾರ್ಯದರ್ಶಿಯಾಗಿ ಜಿ.ಇ. ಹರೀಶ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎಸ್ಸಿ ಮೋರ್ಚಾದ ಪ್ರವೀಣ್, ಹಿರಿಯ ಕಾರ್ಯಕರ್ತ ರಾಜಪ್ಪ, ರಘು, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.