ಮಡಿಕೇರಿ, ಅ. 9: ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರ ಕೃಷಿ ಫಸಲನ್ನು ಹಾನಿಪಡಿಸಿದೆ. ಅಲ್ಲಿನ ಚೋಯಮಾಡಂಡ ಅಚ್ಚಪ್ಪ, ಮೊಣ್ಣಪ್ಪ, ಪೂವಯ್ಯ, ಕರುಂಬಯ್ಯ, ಚಿನ್ನಪ್ಪ, ಚೀಯಣ್ಣ ಎಂಬವರ ಗದ್ದೆಗೆ ನುಗ್ಗಿರುವ ಆನೆಗಳು ಕೃಷಿ ಫಸಲನ್ನು ತುಳಿದು ನಾಶಗೊಳಿಸಿದೆ. ಈ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಉಪಟಳವೂ ಹೆಚ್ಚಿದ್ದು, ಇದೀಗ ಆನೆ ದಾಳಿಯಿಂದ ಆತಂಕಗೊಳ್ಳುವಂತಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.