ನಾಪೆÇೀಕ್ಲು, ಅ. 9: ನಾಪೆÇೀಕ್ಲುವಿನಲ್ಲಿ ಸುರಿದ ಮಳೆಯ ಪರಿಣಾಮ ಚರಂಡಿಯಲ್ಲಿ ಹರಿಯಬೇಕಿದ್ದ ಮಳೆ ನೀರು ಮಾಂಸದ ಅಂಗಡಿಗೆ ನುಗ್ಗಿದ ಘಟನೆ ನಡೆದಿದೆ. ಅಂಗಡಿಯ ಸಮೀಪ ನೂತನ ಕಟ್ಟಡ ನಿರ್ಮಿಸುವ ಸಲುವಾಗಿ ಚರಂಡಿ ಬಂದ್ ಆಗಿರುವದೇ ಇದಕ್ಕೆ ಕಾರಣ ಎಂದು ಅಂಗಡಿ ಮಾಲೀಕ ಸಬೀರ್ ದೂರಿದ್ದಾರೆ. ಕೂಡಲೇ ಚರಂಡಿ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.