ಸಿದ್ದಾಪುರ, ಅ. 7: ಹಾಥರಸ್ ಅತ್ಯಾಚಾರ ಖಂಡಿಸಿ ಸಿದ್ದಾಪುರ ಪಟ್ಟಣದಲ್ಲಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು ಉತ್ತರಪ್ರದೇಶ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಐ.ಎನ್.ಡಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ವಕೀಲ ಎಂ.ಎಸ್ ವೆಂಕಟೇಶ್, ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಡಾ. ದುರ್ಗಪ್ರಸಾದ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ, ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸ, ಪ್ರಮುಖರಾದ ಸಜಿ ಥೋಮಸ್, ಪೂವಮ್ಮ, ಸಿ.ಪಿ.ಐ.ಎಂ. ಮುಖಂಡರಾದ ಎನ್.ಡಿ. ಕುಟ್ಟಪ್ಪ, ರಮೇಶ್, ಅನಿಲ್ ಸೇರಿದಂತೆ ಇನ್ನಿತರರು ಇದ್ದರು.