ಶ್ರೀಮಂಗಲ, ಅ. 7: ರೋಟರಿ ಗೋಣಿಕೊಪ್ಪಲು ಸಂಸ್ಥೆಯು ಕೋವಿಡ್-19ರ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಪೆÇನ್ನಂಪೇಟೆ ಬಸ್ ನಿಲ್ದಾಣದಿಂದ ಗೋಣಿಕೊಪ್ಪಲು ಬಸ್ ನಿಲ್ದಾಣದವರೆಗೆ ಧ್ವನಿವರ್ಧಕದ ಮೂಲಕ ಕೋವಿಡ್-19ರ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ಸಾರಲಾಯಿತು. ಕಾರ್ಯಕ್ರಮದ ಅಧ್ಯಕ್ಷೆ ಮೂಕಳೆರ ಬೀಟಾ ಲಕ್ಷ್ಮಣ್ ಕೊರೊನಾ ಸೋಂಕು ತಡೆಗಟ್ಟುವಿಕೆಯಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ತಿಳಿಸಿದರು.
ರೋಟರಿ ಕಾರ್ಯದರ್ಶಿ ಕಳ್ಳಿಚಂಡ ಮುತ್ತಪ್ಪ, ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಹಾಗೂ ಪಂಚಾಯಿತಿ ಸದಸ್ಯ ಮೂಕಳೇರ ಲಕ್ಷ್ಮಣ್, ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರುಗಳಾದ ಪೂಣಚ್ಚ ಪಿ.ಬಿ., ವಾಸು ಉತ್ತಪ್ಪ, ನೇವಿನ್. ಕೆ.ಬಿ., ಪೂಣಚ್ಚ. ಟಿ.ಬಿ. ಹಾಗೂ ಸಜನ ಚೆಂಗಪ್ಪ ಹಾಜರಿದ್ದರು.