ಕುಶಾಲನಗರ, ಅ. 7: ಆರೋಗ್ಯ ಇಲಾಖೆ ಮತ್ತು ಕೊಪ್ಪ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ ಕೊರೊನಾ ಸೋಂಕಿನ ಪರೀಕ್ಷೆ ನಡೆಯಿತು. ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಆಂಟಿಜನ್ ಕಿಟ್ ಮೂಲಕ ಸ್ಥಳದಲ್ಲೇ ಪರೀಕ್ಷೆಯ ವರದಿ ನೀಡಲಾಯಿತು.
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 95 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು 6 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಆವರ್ತಿ ಗ್ರಾಮದಲ್ಲೂ ಪರೀಕ್ಷೆ ನಡೆಸಲಾಗಿ 69 ಮಂದಿಯ ಪೈಕಿ 8 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.