ಸಿದ್ದಾಪುರ, ಅ. 7: ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ಹಾಗೂ ಸಿದ್ದಾಪುರ ನಿವಾಸಿ ಕೆ. ಉಸ್ಮಾನ್ ಹಾಜಿ ಅವರ ನಿಧನಕ್ಕೆ ಸಿದ್ದಾಪುರ ವಲಯ ಕಾಂಗ್ರೆಸ್ ವತಿಯಿಂದ ಸಂತಾಪ ಸಭೆ ನಡೆಯಿತು. ಸಿದ್ದಾಪುರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯಲ್ಲಿ ಎಂ.ಎಸ್. ವೆಂಕಟೇಶ್, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಮೂಸಾ, ಸಿದ್ದಾಪುರ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಮಣಿ, ದೇವಜಾನು ಹಾಗೂ ಇನ್ನಿತರರು ಹಾಜರಿದ್ದರು.