ಮಡಿಕೇರಿ, ಅ.6 : ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)ಮೈಸೂರು ಜಿಲ್ಲಾ ಅಧೀಕ್ಷಕಿಯಾಗಿ ಕರ್ನಾಟಕ ಪೆÇಲೀಸ್ ಅಕಾಡೆಮಿಯ ಉಪನಿರ್ದೇಶಕಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಅಧೀಕ್ಷಕಿಯಾಗಿದ್ದ ರಶ್ಮಿ ಅವರನ್ನು ಕಲಬುರ್ಗಿಯ ಸಿಆರ್‍ಇ ಘಟಕದ ಅಧ್ಯಕ್ಷರನ್ನಾಗಿ ವರ್ಗಾಯಿಸಲಾಗಿದೆ. ಸುಮನ್ ಪನ್ನೇಕರ್ ಅವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು.