ಮಡಿಕೇರಿ, ಅ. 6: ಜಿಲ್ಲೆಯಲ್ಲಿ ಹೊಸದಾಗಿ 96 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3259 ಪ್ರಕರಣಗಳು ವರದಿಯಾಗಿದ್ದು, 2627 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 49 ಮಂದಿ ಸಾವನ್ನಪ್ಪಿದ್ದು 583 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 117 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 104 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 362 ಮಂದಿ ಹೋಮ್ ಐಸೋಲೇಷನ್ ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 508 ನಿಯಂತ್ರಿತ ವಲಯಗಳಿವೆ.