ಗೋಣಿಕೊಪ್ಪ ವರದಿ, ಅ. 6: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಂದ್ ಹಾಗೂ ದೇವಸ್ಥಾನಗಳ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಬಾಳಾಜಿ ಗ್ರಾಮದಲ್ಲಿರುವ ಕಂಗಳತ್ತ್‍ನಾಡ್ ಮಂದ್ ಸುತ್ತಲಿನ ಕಳೆಯನ್ನು ಕಳೆ ಕೊಚ್ಚುವ ಯಂತ್ರದ ಮೂಲಕ ತೆಗೆಯಲಾಯಿತು. ದೊಡ್ಡಮಾಡ್ ದೇವಸ್ಥಾನದ ಆವರಣವನ್ನು ಸಮಿತಿ ಸದಸ್ಯರು ಸೇರಿ ಶ್ರಮದಾನ ಮಾಡಿದರು.