ಕೂಡಿಗೆ, ಅ. 6: ಕೊಡಗು ಜಿಲ್ಲೆಯ ಕೂಡಿಗೆ ಡಯಟ್‍ನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಏರ್ಪಡಿಸಿರುವ ಮಾಹಿತಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ 10 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಡಯಟ್ ಪ್ರಾಂಶುಪಾಲ ಎ. ಶ್ರೀಧರನ್ ಚಾಲನೆ ನೀಡಿದರು.

ನೋಡಲ್ ಅಧಿಕಾರಿ ಕೆ.ವಿ. ಸುರೇಶ್, ಉಪನ್ಯಾಸಕ ಸಿದ್ದೇಶಿ, ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ. ರವಿಶಂಕರಪ್ಪ, ಪ್ರವೀಣ್ ಕಾಮತ್, ಎಂ.ಎಸ್. ಜಯಲಕ್ಷ್ಮಿ, ತರಬೇತಿನಿರತ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.