ಮಡಿಕೇರಿ, ಅ. 6: ಮಡಿಕೇರಿ ಬಿಜೆಪಿ ಕಚೇರಿಯಲ್ಲಿ ಶಕ್ತಿ ಕೇಂದ್ರದ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ಕಾಂಗೀರ ಸತೀಶ್ ವಹಿಸಿದ್ದರು. ಸಭೆಯಲ್ಲಿ ಕಾಂತೂರು-ಮೂರ್ನಾಡು ಕೇಂದ್ರದ ಪ್ರಮುಖ್ ಆಗಿ ಪಳಗಂಡ ಅಪ್ಪಣ್ಣ, ನರಿಯಂದಡ ಚೆಯ್ಯಂಡಾಣೆ ಕೇಂದ್ರದ ಪ್ರಮುಖ್ ಆಗಿ ನೆಲ್ಲಚಂಡ ಕಿರಣ್, ನಾಪೆÇೀಕ್ಲು ಕೇಂದ್ರದ ಪ್ರಮುಖ್ ಆಗಿ ವಾಂಚಿರ ಅಜಯ್, ಭಾಗಮಂಡಲ ಕೇಂದ್ರದ ಪ್ರಮುಖ್ ಆಗಿ ಕುದುಪಜೆ ಪುರುಷೋತ್ತಮ್, ಕಡಗದಾಳು ಕೇಂದ್ರದ ಪ್ರಮುಖ್ ಆಗಿ ರಕ್ಷಿತ್ ಪೂಜಾರಿ, ಮಕ್ಕಂದೂರು ಕೇಂದ್ರದ ಪ್ರಮುಖ್ ಆಗಿ ಯಾಲದಾಳು ಪದ್ಮಾವತಿ, ಸಂಪಾಜೆ ಕೇಂದ್ರದ ಪ್ರಮುಖ್ ಆಗಿ ಕುಮಾರ್ ಚೆದ್ಕಾರ್ ಅವರನ್ನು ಅಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ತಳೂರು ಕಿಶೋರ್‍ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಕೋಡಿರ ಪ್ರಸನ್ನ, ಡೀನ್ ಬೋಪಣ್ಣ, ತಾಲೂಕು ಉಪಾಧ್ಯಕ್ಷ ಬೆಪ್ಪುರನ ಮೇದಪ್ಪ ಹಾಗೂ ಸುಭಾಷ್, ರೀಟಾ ಮುತ್ತಣ್ಣ, ಕಾರ್ಯಾಲಯ ಕಾರ್ಯದರ್ಶಿ ಧನುಂಜಯ ಅಗೋಳಿಕಜೆ, ತಾಲೂಕು ಒಬಿಸಿ ಮೋರ್ಚಾದ ಅಧ್ಯಕ್ಷ ಕೊಲೆಯಂಡ ಗಿರೀಶ್, ಯುವ ಮೋರ್ಚಾದ ಅಧ್ಯಕ್ಷ ಹೇಮಂತ್ ತೋರೆರ ಮೊದಲಾದವರು ಉಪಸ್ಥಿತರಿದ್ದರು.