ಮಡಿಕೇರಿ, ಅ. 6: ಕಲ್ಲುಗುಂಡಿ ದಬ್ಬಡ್ಕ ಸಮೀಪದ ಏಣಿಯಾರು ಎಂಬಲ್ಲಿ ಬರೆ ಕುಸಿತ ಉಂಟಾಗಿ, ರಸ್ತೆಯಲ್ಲಿ ಬಂಡೆಕಲ್ಲು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಊರುಬೈಲು ಶ್ರೀ ಭಗವಾನ್ ಸಂಘದ ಸದಸ್ಯರು, ಸದಸ್ಯ ಸಚಿನ್ ಕೆದಂಬಾಡಿ ಮುಂದಾಳತ್ವದಲ್ಲಿ ಶ್ರಮದಾನ ಮಾಡಿ, ಬಂಡೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.