ಭಾಗಮಂಡಲ, ಅ. 5: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ 19ನೇ ವರ್ಷದ ಸ್ವಚ್ಛತಾ ಆಂದೋಲನವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮಕ್ಕೆ ಭಾಗಮಂಡಲ ಗ್ರಾ.ಪಂ. ಪಿಡಿಒ ಅಶೋಕ್ ಚಾಲನೆ ನೀಡಿದರು. ಬಳಿಕ ಭಾಗಮಂಡಲದಿಂದ ಕರಿಕೆ ಜಂಕ್ಷನ್‍ನಿಂದ ಮಾರುಕಟ್ಟೆವರೆಗೆ ಸ್ವಚ್ಛತೆ ನಡೆಸಲಾಯಿತು. ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ರಸ್ತೆಯ ಎರಡೂ ಬದಿ ಶುಚಿಗೊಳಿಸಲಾಯಿತು. ಕಾವೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ದೇವಂಗೋಡಿ ಶಿವ, ಕಾರ್ಯದರ್ಶಿ ಪಳಂಗೋಟು ಭರತ್ ಹಾಗೂ ಆಟೋ ಚಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು.