ವೀರಾಜಪೇಟೆ, ಅ. 4: ವೀರಾಜಪೇಟೆಯ ಫೀಲ್ಡ್ ಮಾರ್ಷಲ್ ರಸ್ತೆಯಲ್ಲಿರುವ ಮುನೀಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಕಾರ್ತಿಕ್ ರಾಜ್ ಎಲೆಕ್ಟ್ರಿಕಲ್ ಅಂಗಡಿ ಮಳಿಗೆಯಲ್ಲಿ ಶಾರ್ಕ್ ಸಕ್ರ್ಯೂಟ್ ಉಂಟಾಗಿ ಅಂಗಡಿ ಮಳಿಗೆ ಭಾಗಶಃ ಬೆಂಕಿಯಿಂದ ಸುಟ್ಟುಹೋಗಿದೆ. ಸುಮಾರು ರೂ. 3 ಲಕ್ಷ ನಷ್ಟ ಸಂಭವಿಸಿರುವುದಾಗಿ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಈ ಅಂಗಡಿ ಮಳಿಗೆಯಿಂದ ಹೊಗೆ ಬರುತ್ತಿದ್ದುದನ್ನು ಕಂಡ ಸಮೀಪದ ನಿವಾಸಿಗಳು ಅಂಗಡಿ ಮಾಲೀಕ ಟಿ.ಪಿ. ರಾಜ ಅವರಿಗೆ ಸುಳಿವು ನೀಡಿದ್ದು, ಅವರು ಬರುವಷ್ಟರಲ್ಲಿ ಶಾರ್ಟ್ ಸಕ್ರ್ಯೂಟ್ನಿಂದ ಎಲೆಕ್ಟ್ರಿಕ್ ಸಾಮಗ್ರಿಗಳೆಲ್ಲಾ ಸುಟ್ಟು ಹೋಗಿದ್ದವು ಎಂದು ಹೇಳಲಾಗಿದೆ.