ಮಡಿಕೇರಿ, ಅ.5: ಮಡಿಕೇರಿ ನಗರದಲ್ಲಿ ಮಳೆಯ ವಾತಾವರಣ ಕಡಿಮೆಯಾಗಿದ್ದು, ಸಾಂಪ್ರದಾಯಿಕ ದಸರಾ ಹಬ್ಬ ಸಮೀಪಿಸುತ್ತಿದೆ. ತಕ್ಷಣ ನಗರಸಭೆ ರಸ್ತೆಗಳ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯವನ್ನು ಆರಂಭಿಸಬೇಕೆಂದು ನಗರಸಭೆಯ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಯಾವುದೇ ರಸ್ತೆಗಳ ದುರಸ್ತಿ ಕಾರ್ಯ ನಡೆಯದೇ ಇರುವುದರಿಂದ ವಾಹನ ಚಾಲಕರು ಮಾತ್ರವಲ್ಲದೆ ಪಾದಚಾರಿಗಳು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ಯೋಜನೆಗಳಡಿ ನಗರಸಭೆಗೆ ಬಿಡುಗಡೆಯಾಗಿ ಖರ್ಚಾಗದೇ ಉಳಿದಿರುವ ಅನುದಾನ ವÀನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು. ಬೀದಿ ದೀಪಗಳು ಮತ್ತು ಚರಂಡಿಗಳ ದುರಸ್ತಿ ಕಾರ್ಯಕ್ಕೂ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.