ಶ್ರೀಮಂಗಲ, ಅ. 3: ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಆದೇಶವನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ಕೊಡವ ಭಾಷೆಯನ್ನು ಪಠ್ಯಕ್ರಮದಲ್ಲಿ ಜಾರಿಗೆ ತರಲು ಆಯ್ದ ಶಾಲೆಗಳ 1ನೇ ತರಗತಿ ಮಕ್ಕಳಿಗೆ ಕಲಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಶಾಲಾ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ಪೂರ್ವಭಾವಿ ಸಭೆ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖರ ಅಭಿಪ್ರಾಯವನ್ನು ಬಯಸಿದ ಸಂದರ್ಭ ಕೊಡವ ಪಠ್ಯಕ್ರಮ ಜಾರಿ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ, ಒಂದು ಜನಾಂಗ ಹಾಗೂ ಸಂಸ್ಕøತಿ ಉಳಿಯಲು ಭಾಷೆಯ ಬೆಳವಣಿಗೆ ಅತ್ಯಂತ ಅಗತ್ಯವಾಗಿದೆ ಎಂದರು.
ಅಕಾಡೆÀಮಿ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ ಅಕಾಡೆಮಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿಯೇ ಕೊಡವ ಭಾಷೆಯಲ್ಲಿ ಶಿಕ್ಷಣ ಜಾರಿಗೆ ತರಲು ಪ್ರಯತ್ನ ನಡೆಸಲಾಯಿತು. ಉಳ್ಳಿಯಡ ಪೂವಯ್ಯ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದ 20 ವರ್ಷದ ಹಿಂದೆಯೇ ಕೊಡವ ಭಾರತಿ ಎಂಬ ಪಠ್ಯ ಪುಸ್ತಕವನ್ನು ರಚನೆ ಮಾಡಲಾಗಿದೆ. ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಮನವಿಯೊಂದಿಗೆ ಸೂಕ್ತ ದಾಖಲೆಯನ್ನು ಸಲ್ಲಿಸಲಾಗಿದೆ. ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಕೊಡವ ಭಾಷೆಯನ್ನು ಈಗಾಗಲೇ ರಚನೆಯಾಗಿರುವ ಕೊಡವ ಭಾರತಿ ಪಠ್ಯಪುಸ್ತಕದ ಮೂಲಕ ಜಾರಿಗೆ ತರಬೇಕು.ಇದನ್ನು ಬೋಧಿಸುವ ಶಿಕ್ಷಕರಿಗೆ ಸೂಕ್ತ ಕಾರ್ಯಾಗಾರ ಮಾಡಬೇಕು ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ಮಾತನಾಡಿ, ಕಳೆದ ವರ್ಷವೇ ಕ್ಷೇತ್ರಶಿಕ್ಷಣ ಅಧಿಕಾರಿಗಳು ಕೊಡವ ಭಾಷೆ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಸಂಸ್ಥೆ ಹಾಗೂ ಮಕ್ಕಳು-ಪೋಷಕರ ಅಭಿಪ್ರಾಯ ಪಡೆಯಲು ಎಲ್ಲಾ ಶಾಲೆÉಗಳಿಗೆ ಪತ್ರ ಬರೆದಿದ್ದರು.ಕೊಡವ ಭಾಷೆಯನ್ನು ಇತರ ಭಾಷೆಯೊಂದಿಗೆ ಒಂದು ಭಾಷೆಯಾಗಿ ಅಥವಾ ವಿಷಯವಾಗಿ ಕಲಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಕೊಡವ ಭಾಷೆಯಲ್ಲಿ ಶಿಕ್ಷಣ ಪದ್ದತಿ ಜಾರಿಗೆ ತರಲು ಈಗಾಗಲೇ ಹಲವು ಶಾಲೆಗಳು ಆಸಕ್ತಿ ತೋರಿವೆ. ಪಠ್ಯಕ್ರಮವನ್ನು ಜಾರಿಗೆ ತರುವುದರಿಂದ ಕೊಡವ ಭಾಷೆಯನ್ನು 8ನೇ ಶೆಡ್ಯೂಲಿಗೆ ಸೇರಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ಕೊಡವ ಭಾಷೆಗೆ ಲಿಪಿ ಇಲ್ಲದಿದ್ದರೂ ಭಾಷೆ-ಸಾಹಿತ್ಯದ ಬೆಳವಣಿಗೆಗೆ ಯಾವುದೇ ಕೊರತೆ ಯಾಗಿಲ್ಲ. ಕೊಡವ ಭಾಷೆಯನ್ನು ಆಡಳಿತದಲ್ಲಿ ಮೂರನೇ ಭಾಷೆಯಾಗಿ ಸರಕಾರ ಜಾರಿಗೆ ತರಬೇಕು.ಕೊಡವ ಭಾಷಾ ಬೆಳವಣಿಗೆಗೆ ಅಕಾಡೆಮಿಯಿಂದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದರು.
400 ಪುಟದ ಕೊಡವ ಭಾಷೆ ಕಲಿಯುವ ಶಬ್ದಗೂಡು ಎಂಬ ಪುಸ್ತಕವನ್ನು ಹೊರತರುವ ಪ್ರಕ್ರಿಯೆ ತಜ್ಞರ ಅಂತಿಮ ಪರಿಶೀಲನೆಯಲ್ಲಿದೆ. ಅಂತರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಸ್ಥಳಿಯವಾಗಿ ಕೊಡವ ಭಾಷೆಯನ್ನು ಎಲ್ಲರೂ ಸುಲಭವಾಗಿ ಕಲಿಯಲು ಇದು ಸಹಕಾರಿಯಾಗಲಿದೆ ಎಂದು ಹೇಳಿ ದರು. ಕಾರ್ಯಕ್ರಮದ ಸಂಚಾಲಕ ಅಕಾಡೆಮಿ ಸದಸ್ಯ ಪಡಿಂಞರಂಡ ಪ್ರಭುಕುಮಾರ್, ತೇಲಪಂಡ ಕವನ್ ಕಾರ್ಯಪ್ಪ, ಮಾಚಿಮಾಡ ಜಾನಕಿ, ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ, ಉಪಾಧ್ಯಕ್ಷ ಚಪ್ಪುಡಿರ ಬೋಪಣ್ಣ, ಗೌ.ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಅಪ್ಪಚ್ಚುಕವಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಮಲಚೀರ ಆಶಾಗಣೇಶ್, ಉಪಾಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಕಾರ್ಯದರ್ಶಿ ಮೂಕಳಮಾಡ ಅರಸುನಂಜಪ್ಪ, ಶಿಕ್ಷಣ ತಜ್ಞೆ ಮನೆಯಪಂಡ ಸಚಿನಂಜಪ್ಪ, ಮಾರ್ಚಂಡ ಗಣೇಶ್ ಮತ್ತಿತರರು ಭಾಗವಹಿಸಿದ್ದರು.