ಶ್ರೀಮಂಗಲ, ಅ. 3: ತಲಕಾವೇರಿ ಮತ್ತು ಭಾಗಮಂಡಲ ಧಾರ್ಮಿಕ ಕ್ಷೇತ್ರಕ್ಕೆ ಬರುವ ಕೊಡವರು ಕುಪ್ಯಚೇಲೆ ತೊಟ್ಟು ಬರಬಾರದು ಎಂದು ಫರ್ಮಾನು ಹೊರಡಿಸಿರುವ ನಾಗರಿಕ ಸಮಿತಿ ಎಂಬ ಒಂದು ಸಮುದಾಯದ ಕೆಲವರ ಹೇಳಿಕೆಗೆ ತಿರುಗೇಟು ನೀಡಿರುವ ಹುದಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಕೊಡವ ಮಹಿಳೆಯರು ಸಂಪ್ರದಾಯಿಕ ಸೀರೆ ಉಟ್ಟು ಬರಬಹುದೇ ಎಂದು ವ್ಯಂಗವಾಗಿ ಪ್ರಶ್ನಿಸಿದ್ದಾರೆ.
ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೀದೇರಿರ ನವೀನ್ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವiಂಡಲದ ನಾಗರಿಕ ಸಮಿತಿ ಎಂಬ ಹೆಸರಿನಲ್ಲಿ ನೀಡಿರುವ ಹೇಳಿಕೆಯನ್ನು ಆಕ್ಷೇಪಿಸಲಾಯಿತು.
ಸಮಾಜದ ಸಾಮರಸ್ಯ ಕಾಪಾಡಬೇಕಾದ ಸಮಿತಿ ಪ್ರಮುಖರು ಕ್ಷುಲ್ಲಕ ಹೇಳಿಕೆಗಳನ್ನು ನೀಡಿ ಜನಾಂಗೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವುದನ್ನು ಖಂಡಿಸಲಾಯಿತು.
ಸಭೆಯಲ್ಲಿ ಸಮಾಜದ ಕಾರ್ಯದರ್ಶಿ ಚೆÀಕ್ಕೇರ ಹರೀಶ್ ನಂಜಪ್ಪ, ಜಂಟಿ ಕಾರ್ಯದರ್ಶಿ ಐಪುಮಾಡ ರೋನಿ, ಖಜಾಂಚಿ ಕ್ರ್ಂದಂಡ ಪ್ರವೀಣ್, ನಿರ್ದೇಶಕರಾದ ಚೆಕ್ಕೇರ ರಂಜೀತ್, ಅಜ್ಜಿಕುಟ್ಟೀರ ನವೀನ್ನಾಚಪ್ಪ ಸಮಾಜದ ಮಾಜಿ ಅಧ್ಯಕ್ಷರುಗಳಾದ ಚೆಕ್ಕೇರ ವಾಸುಕುಟ್ಟಪ್ಪ, ಅಳಮೇಂಗಡ ಡಬ್ಲ್ಯೂ ಮುದ್ದಪ್ಪ ಹಾಜರಿದ್ದರು.