ಮಡಿಕೇರಿ, ಅ. 3: ಕೊರೊನಾ ಕಾರಣದಿಂದಾಗಿ ಜಿಲ್ಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಪ್ರವಾಸಿಗರುÀ ಹಲವು ನಿರ್ಬಂಧಗಳಿಂದಾಗಿ ಹಾಗೂ ಆತಂಕದ ಕಾರಣದಿಂದಾಗಿ ಕಡಿಮೆಯಾಗಿದ್ದರು. ಇದೀಗ ಹಲವು ತಿಂಗಳ ಬಳಿಕ ನಿನ್ನೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಪ್ರದೇಶಗಳು ಚಟುವಟಿಕೆಗಳಿಂದ ಕೂಡಿತ್ತು. ಶುಕ್ರವಾರವಾದ ನಿನ್ನೆ ಗಾಂಧಿ ಜಯಂತಿ, ಇಂದು ಶನಿವಾರ ಹಾಗೂ ತಾ. 4ರಂದು (ಇಂದು) ಭಾನುವಾರದ ರಜಾ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯತ್ತ ಮುಖ ಮಾಡಿದ್ದರು.