ಸೋಮವಾರಪೇಟೆ, ಅ. 3: ಸರ್ಕಾರದ ಪರಿಹಾರ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ.
ತಾಕೇರಿ ಗ್ರಾಮದ ನಿವಾಸಿ ಪೂವಯ್ಯ ಎಂಬವರ ವಾಸದ ಮನೆ 2018-19ನೇ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದರಿಂದ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ಮೇರೆ ಮನೆ ನಿರ್ಮಾಣಕ್ಕಾಗಿ 4 ಹಂತಗಳಲ್ಲಿ ಒಟ್ಟು 9,80,000 ಹಣ ಬಿಡುಗಡೆಯಾಗಿದೆ. ಮನೆ ನಿರ್ಮಾಣದ ಬಗ್ಗೆ ಕಂದಾಯ ಇಲಾಖೆ ಪರಿವೀಕ್ಷಕರು ಪರಿಶೀಲಿಸಿದಾಗ ಪೂವಯ್ಯ ಅವರು ಮನೆ ನಿರ್ಮಾಣ ಮಾಡದೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಬೇರೆ ಬೇರೆ ಮನೆಗಳನ್ನು ತೋರಿಸಿ ಸರ್ಕಾರದ ಪರಿಹಾರ ಹಣ ಪಡೆದು ವಂಚನೆ ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಕಂದಾಯ ಪರಿವೀಕ್ಷಕÀ ವಿನು ಅವರು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.