ಗೋಣಿಕೊಪ್ಪ ವರದಿ, ಅ. 3: ತಿತಿಮತಿ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷರಾಗಿ ಚೆಪ್ಪುಡೀರ ಕಾರ್ಯಪ್ಪ ಅವರನ್ನು ಅಯ್ಕೆ ಮಾಡಲಾಯಿತು.

ತಿತಿಮತಿ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಕೆ.ಎಂ. ಮೊಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಯಾಗಿ ಬಿ. ವಸಂತ್ (ನಂಜಪ್ಪ), ಕಾರ್ಯದರ್ಶಿಯಾಗಿ ಹೆಚ್.ಜಿ ಚಂದ್ರಶೇಖರ್, ಸದಸ್ಯರುಗಳಾಗಿ ಎಸ್.ಸಿ. ಪ್ರೀತಮ್, ಹೆಚ್.ಜೆ. ರವಿ, ಸಿ.ಕೆ. ತಮ್ಮಯ್ಯ, ಬಿ.ಬಿ. ಚಂಗಪ್ಪ, ಸಿ.ಪಿ. ಸೋಮಯ್ಯ, ಎಸ್.ಆರ್. ಮಂಜುನಾಥ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ತಿತಿಮತಿ ಶಕ್ತಿ ಕೇಂದ್ರ ಪ್ರಮುಖ್ ಅನೂಪ್, ಸಹ ಪ್ರಮುಖ್ ಗೋವಿಂದ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಜಿಲ್ಲಾ ಬಿಜೆಪಿ ಖಜಾಂಚಿ ಚೆಪ್ಪುಡೀರ ಮಾಚಯ್ಯ, ತಾಲೂಕು ಖಜಾಂಚಿ ಚೆಪ್ಪುಡೀರ ಪ್ರದೀಪ್, ಸದಸ್ಯರಾದ ಕಟ್ಟೇರ ಕವನ್, ಮನೆಯಪಂಡ ಮಹೇಶ್, ಕಾಯಪಂಡ ಮಧು ಮೋಟಯ್ಯ ಇದ್ದರು.