ಮಡಿಕೇರಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 104ನೆ ಹುಟ್ಟುಹಬ್ಬದ ಆಚರಣೆಯನ್ನು ಪುಟಾಣಿ ನಗರದಲ್ಲಿ ಆಚರಿಸಲಾಯಿತು. ವಾರ್ಡ್ ಅಧ್ಯಕ್ಷ ವೇಣುಗೋಪಾಲ್, ನಗರ ಬಿಜೆಪಿ ಖಜಾಂಚಿ ಎಸ್. ಮುರುಗನ್ ಮುತ್ತ, ಪ್ರಮುಖರಾದ ಚಾರ್ಲಿ, ವಾರ್ಡ್ ಕಾರ್ಯದರ್ಶಿ ಪುರುಷೋತ್ತಮ, ಸುಜು, ರಾಮ, ಗಗನ್, ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ನಗರ ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಯಿತು.

ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರುಗಳಾದ ಬಿ.ಕೆ. ಪ್ರಶಾಂತ್ ಹಾಗೂ ವಾಸು ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷದ ಸ್ಥಾಪಕ ಅಧ್ಯಕ್ಷರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪಕ್ಷನಿಷ್ಠೆ, ಸಂಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಜನ್ಮದಿನವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಮಾರಂಭದಲ್ಲಿ ಸಹ ಪ್ರಮುಖರಾದ ರಂಜಿತ್ ಪೂಜಾರಿ, ನಾಗೇಶ್ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ಎಸ್. ವಿಘ್ನೇಶ್, ಓಬಿಸಿ ಅಧ್ಯಕ್ಷ ಸಿ.ಸಿ. ಸುನಿಲ್‍ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಕೃಷಿ ಮೋರ್ಚಾ ಅಧ್ಯಕ್ಷ ರಮೇಶ್ ಪಿಳ್ಳೈ, ಸಂದೀಪ್, ಎಸ್‍ಸಿ ಮೋರ್ಚಾ ಅಧ್ಯಕ್ಷ ಆನಂದ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.ಮಡಿಕೇರಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮ ಮೇಕೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖ್, ಸ್ಥಳೀಯ ಎರಡು ಬೂತ್ ಸಮಿತಿ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು. ಸಮಾಜಕ್ಕಾಗಿಯೇ ಬದುಕಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜೀವನದ ಬಗ್ಗೆ ಜಿತಿನ್ ಅವರು ವಿವರಿಸಿದರು. ಹಾಜರಿದ್ದ ಸರ್ವರೂ ಪಂಡಿತ್ ಅವರ ಭಾವಚಿತ್ರಕ್ಕೆ ಪುಷಾರ್ಚನೆ ಗೈಯುವ ಮೂಲಕ ಗೌರವ ಸಮರ್ಪಿಸಿದರು.ವೀರಾಜಪೇಟೆ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯನ್ನು ವೀರಾಜಪೇಟೆ ಜಂಕ್ಷನ್‍ನಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಬೊಪ್ಪಂಡ ಸುನೀತಾ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿದರು. ಹಿರಿಯರಾದ ಕಂಬೀರಂಡ ಕಸ್ತೂರಿ, ವಸಂತಕುಮಾರ್, ದಿನು ಅಪ್ಪಚ್ಚು, ಪೆÀರ್ಲಕೊಟಿ ಕಾರ್ಯಪ್ಪ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.ಮಡಿಕೇರಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 104ನೇ ಜನ್ಮ ದಿನಾಚರಣೆಯನ್ನು ಮಹದೇವಪೇಟೆ ವಾರ್ಡ್-8 (2)ರ ಅಧ್ಯಕ್ಷ ಬಿ.ಎಂ. ರಾಕೇಶ್ ಅವರ ಮನೆಯಲ್ಲಿ ಆಚರಿಸಲಾಯಿತು. ಈ ಸಂದರ್ಭ ಶ್ರೀ ಚೌಡೇಶ್ವರಿ ದೇವಾಲಯದ ಪ್ರದಾನ ಅರ್ಚಕ ಸತ್ಯೇಶ್ ಭಟ್, ಶಕ್ತಿ ಕೇಂದ್ರ ಪ್ರಮುಖರಾದ ನಾಗೇಶ್, ಜೀವನ್ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್, ಉಪಾಧ್ಯಕ್ಷೆ ಗೌರಮ್ಮ, ಕಲಾವತಿ, ಮಜೀದಾ ಟೌನ್ ಬ್ಯಾಂಕ್ ನಿರ್ದೇಶಕ ಬಿ.ವಿ. ರೋಷನ್, ಗಿರೀಶ್, ವಾರ್ಡ್ ಪ್ರಮುಖರಾದ ಗುರುಲಿಂಗಪ್ಪ, ಶಿವಕುಮಾರ್, ರವಿ, ರಂಜಿತ್‍ಕುಮಾರ್ ಹಾಗೂ ಸಾತ್ವಿಕ್ ಅನ್ವೇಕರ್ ಹಾಜರಿದ್ದರು.ಮಡಿಕೇರಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 104ನೇ ಜನ್ಮ ದಿನಾಚರಣೆಯನ್ನು ಮಹದೇವಪೇಟೆ ವಾರ್ಡ್-8 (2)ರ ಅಧ್ಯಕ್ಷ ಬಿ.ಎಂ. ರಾಕೇಶ್ ಅವರ ಮನೆಯಲ್ಲಿ ಆಚರಿಸಲಾಯಿತು. ಈ ಸಂದರ್ಭ ಶ್ರೀ ಚೌಡೇಶ್ವರಿ ದೇವಾಲಯದ ಪ್ರದಾನ ಅರ್ಚಕ ಸತ್ಯೇಶ್ ಭಟ್, ಶಕ್ತಿ ಕೇಂದ್ರ ಪ್ರಮುಖರಾದ ನಾಗೇಶ್, ಜೀವನ್ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್, ಉಪಾಧ್ಯಕ್ಷೆ ಗೌರಮ್ಮ, ಕಲಾವತಿ, ಮಜೀದಾ ಟೌನ್ ಬ್ಯಾಂಕ್ ನಿರ್ದೇಶಕ ಬಿ.ವಿ. ರೋಷನ್, ಗಿರೀಶ್, ವಾರ್ಡ್ ಪ್ರಮುಖರಾದ ಗುರುಲಿಂಗಪ್ಪ, ಶಿವಕುಮಾರ್, ರವಿ, ರಂಜಿತ್‍ಕುಮಾರ್ ಹಾಗೂ ಸಾತ್ವಿಕ್ ಅನ್ವೇಕರ್ ಹಾಜರಿದ್ದರು.