ವೀರಾಜಪೇಟೆ, ಅ. 3: ವೀರಾಜಪೇಟೆಯ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಚೇಂದಂಡ ನವೀನ್, ಮಾಳೇಟಿರ ಬೋಪಣ್ಣ, ಕಾಂಗ್ರೆಸ್ ಸೇವಾದಳದ ಶರಣು ನಂಜಪ್ಪ, ಬಲ್ಟಿಕಾಳಂಡ ರಂಜಿ, ಮುಕ್ಕಾಟೀರ ಕಾವೇರಮ್ಮ ಸೇರಿದಂತೆ ಒಟ್ಟು 62 ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ನಗರ ಸಮಿತಿ ಅಧ್ಯಕ್ಷ ಟಿ.ಪಿ. ಕೃಷ್ಣ ತಿಳಿಸಿದ್ದಾರೆ.
ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಟೇರ ಗಣೇಶ್, ಬಾಚೀರ ಬಿದ್ದಪ್ಪ, ಅಮ್ಮಂಡ ಸುಮನ್, ಐಮಂಡ ವಿನು, ಕಾಕೋಟುಪರಂಬು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗೀರ ಸತೀಶ್, ಬಲ್ಲಚಂಡ ಸೂರಜ್, ನಳಂದ ಜಗದೀಶ್, ಕಾಂಗೀರ ಅರ್ಜುನ್, ಕೆದಮುಳ್ಳೂರು ಪಂಚಾಯಿತಿಯಿಂದ ಕೊಡೀರ ಪ್ರವೀಣ್, ಮಾಳೇಟಿರ ಸಾಬಾ ಮುತ್ತಪ್ಪ, ಕರಿನೆರವಂಡ ಮಿಟ್ಟು, ಮಾಳೇಟಿರ ಕಿಶೋರ್ ಮೇದಪ್ಪ, ಕರೋಟಿರ ಮಧು, ಚೆಂಬೆಬೆಳ್ಳೂರು ಪಂಚಾಯಿತಿಯಿಂದ ಅಲಪ್ಪಂಡ ವೇಣು, ಐಚಂಡ ಕರುಣ್, ಕುಂದೀರ ನೆಹರು, ಕರ್ನಂಡ ಸೋಮಣ್ಣ, ಮಂಡೇಪಂಡ ಸಚಿನ್, ಬಿ.ಶೆಟ್ಟಿಗೇರಿ ಪಂಚಾಯಿತಿಯಿಂದ ಚೇಮಿರ ಪ್ರಕಾಶ್ ಇತರರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ.
ವೀರಾಜಪೇಟೆಯಲ್ಲಿ ಈಚೆಗೆ ನಡೆದ ಬಿಜೆಪಿ ಪಕ್ಷದ ಸೇರ್ಪಡೆ ಸಭೆಯಲ್ಲಿ ಎಲರನ್ನೂ ಪಕ್ಷಕ್ಕೆ ಸ್ವಾಗತಿಸಲಾಯಿತು.