ವಸ್ತ್ರೇಣಾ ವಪುಷಾ ವಾಚಾ ವಿದ್ಯಯಾ ವಿನಯೇನಚ|
‘ವ’ಕಾರಪಂಚ ಭರ್ಹೀನೋ ನರೋ ನಾಪ್ನೋತಿ ಗೌರವಮ್ ||
ವಸ್ತ್ರ-ವಷುಷೇ, ವಾಕ್, ನಿದ್ಯಾ ಮತ್ತು ವಿನಯ-ಈ ಐದೂ ಮನುಷ್ಯನಿಗೆ ಅತ್ಯಂತ ಮುಖ್ಯವಾದವುಗಳು. ಈ ಐದೂ ವಕಾರಗಳು ಇಲ್ಲವಾದರೆ ಅಂಥ ಮನುಷ್ಯನಿಗೆ ಸಮಾಜದಲ್ಲಿ ಗೌರವವು ದೊರಕುವುದಿಲ್ಲ. ಸಮಾಜದಲ್ಲಿ ಮನುಷ್ಯನು ಗೌರವದಿಂದ ಬಾಳಬೇಕೇ ಹೊರತು ಸುಮ್ಮನೆ ಪಶುಪಕ್ಷಿಗಳಂತೆ ಬದುಕಿದ್ದರೆ ಏನು ಪ್ರಯೋಜನ ? ಗೌರವದಿಂದ ಬಾಳ ಬೇಕಾದರೆ ಮಾನವನಿಗೆ ಈ ಕೆಳಗಿನ ಐದು ವಕಾರಗಳು ಬೇಕೆ ಬೇಕು.
(1) ವಸ್ತ್ರ-ಬಟ್ಟೆ : ಮನುಷ್ಯನಿಗೆ ಬಟ್ಟೆಯು ಬಹಳ ಪ್ರಧಾನವಾದುದು, ಮನುಷ್ಯನು ಬಡವನಾಗಿರಲಿ ಶ್ರೀಮಂತನಾಗಿರಲಿ, ವಿದ್ಯಾವಂತ ನಾಗಿರಲಿ, ಅವಿದ್ಯಾವಂತನಾಗಿರಲಿ ಅವನಿಗೆ ಮಾನ ಮುಚ್ಚುವುದಕ್ಕೆ ಬಟ್ಟೆಯು ಇರಲೇಬೇಕು. ಬಟ್ಟೆಯನ್ನು ಧರಿಸದೆ ಬೆತ್ತಲೆಯಾಗಿ ಓಡಾಡುತ್ತಾ ಮಾನವನು ಸಮಾಜದಲ್ಲಿ ಗೌರವದಿಂದ ಬಾಳುವುದು ಅಸಾಧ್ಯ.
(2) ವಪು-ಶರೀರ : ಒಬ್ಬ್ಬ ವ್ಯಕ್ತಿಗೆ ಆರೋಗ್ಯಯುಕ್ತವಾದ ಶರೀರವೂ ಬೇಕು.
(3) ವಾಕ್ : ಇದಂತೂ ಸಮಾಜದಲ್ಲಿ ಬಾಳಬೇಕಾದರೆ ಅತೀ ಮುಖ್ಯ, ಮಾತಿನ ಮೋಡಿಯಿಂದ ಮನುಷ್ಯನು ಸ್ವಗರ್Àವನ್ನೇ ನಿರ್ಮಾಣ ಮಾಡಬಲ್ಲ ! ಮಾತು ಮುತ್ತಿನಂತಿರಬೇಕು, ಮಾತು ಮಾಣಿಕ್ಯದಂತಿರ ಬೇಕು. ವಾಕ್‍ಚಾತುರ್ಯದಿಂದಲೇ ಮಾನವನಿಗೆ ಸಮಾಜದಲ್ಲಿ ಗೌರವ.
(4) ವಿದ್ಯಾ : ವಿದ್ಯಾವಂತನಾಗದೇ ಬರೀ ಶ್ರೀಮಂತನಾಗಿದ್ದರೆ ಅಂಥವನಿಗೆ ಹೆಚ್ಚಿನ ಗೌರವ ಸ್ಥಾನವು ದೊರಕದು. ಲೌಕಿಕ, ವೈದಿಕ, ಶಾಸ್ತ್ರೀಯ ಜ್ಞಾನದಿಂದ ಮನುಷ್ಯನ ಯೋಗ್ಯತೆಯು ಹೆಚ್ಚುತ್ತದೆ.
(5) ವಿನಯ : ವಿನಯಶೀಲನಾಗಿರುವುದು ಗೌರವಕ್ಕೆ ಕಾರಣವಾಗುತ್ತದೆ. ವಾಕ್‍ಚಾತುರ್ಯ ಹಾಗೂ ವಿದ್ಯೆಯ ಜೊತೆಗೆ ವಿನಯವೂ ಸೇರಿ ಬಿಟ್ಟರೆ ಅಂಥವನನ್ನು ಲೋಕವೇ ಕೊಂಡಾಡುತ್ತದೆ.-ಗೌರವಿಸುತ್ತದೆ. ಹೀಗೆ ಮಾನವನು ಈ ಐದರಿಂದ ಗೌರವಿಸಲ್ಪಡುತ್ತಾನೆ.
(ಸಂಗ್ರಹ) ಸಂಪತ್‍ಕುಮಾರ್ ಎಸ್. ಎಸ್.
ಭಾಗಮಂಡಲ.