ಸಿದ್ದಾಪುರ, ಅ. 2: ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ ಪಾಲಿಬೆಟ್ಟ ಸಮೀಪದ ಚೆನ್ನಂಗಿ ಗ್ರಾಮದಿಂದ ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿರುವ ಖಚಿತ ಸುಳಿವಿನ ಮೇರೆಗೆ ಶುಕ್ರವಾರ ಬೆಳಗಿನ ಜಾವ ಸಿದ್ದಾಪುರ ಪೊಲೀಸರು ದಾಳಿ ನಡೆಸಿ, ಆರೋಪಿಗಳಾದ ಪಾಲಿಬೆಟ್ಟದ ರಾಸಿಕ್, ಇಂತಿಯಾಜ್, ಹಮೀದ್ ಇವರುಗಳನ್ನು ಬಂಧಿಸಿದ್ದಾರೆ. ಕೋಣಗಳನ್ನು ಚೆಟ್ಟಿಮಾನಿ ಗೋಶಾಲೆಗೆ ಸ್ಥಳಾಂತರ ಮಾಡಲಾಗಿದೆ.