ಮಡಿಕೇರಿ, ಅ. 2: ಕರ್ನಾಟಕ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆ ಸಕಲೇಶಪುರದಲ್ಲಿ ನಡೆದು ಅಧ್ಯಕ್ಷ ಯು.ಎಂ. ತೀರ್ಥ ಮಲ್ಲೇಶ್ ಅವರು ರಾಜೀನಾಮೆ ನೀಡಿದರು. ನಂತರ ಹಿರಿಯರು ಹಾಗೂ ಸಭೆಯು ಸರ್ವಾನುಮತದಿಂದ ಕರ್ನಾಟಕ ಬೆಳೆಗಾರರ ಒಕ್ಕೂಟದ ಹಾಸನ ಜಿಲ್ಲೆಯ ಉಪಾಧ್ಯಕ್ಷ ಎನ್.ಬಿ. ಉದಯ್‍ಕುಮಾರ್ ಅವರು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.