ಕುಶಾಲನಗರ, ಅ. 2: ಭಾರತೀಯ ಜನತಾ ಪಾರ್ಟಿಯ ಕುಶಾಲನಗರ ನಗರ ಘಟಕದ ಅಧ್ಯಕ್ಷರಾಗಿ ವಿ.ಎನ್. ಉಮಾಶಂಕರ್ ಅವರನ್ನು ನೇಮಕ ಮಾಡಲಾಗಿದೆ. ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರಾದ ಮನುಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ನಗರ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಲಾಯಿತು. ನಗರ ಬಿಜೆಪಿ ಸಹ ಪ್ರಮುಖ್ ಆಗಿ ಹೆಚ್.ಡಿ.ಶಿವಾಜಿ, ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಡಿ.ಕೆ.ಚಂದ್ರಶೇಖರ್, ಬಿಜೆಪಿ ಪರಿಶಿಷ್ಟ ಜಾತಿಯ ಅಧ್ಯಕ್ಷರಾಗಿ ಚನ್ನಯ್ಯ, ಬಿಜೆಪಿ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಚಂದ್ರಶೇಖರ್, ಶಕ್ತಿ ಕೇಂದ್ರದ ಪ್ರಮುಖ್ ಆಗಿ ಪ್ರವೀಣ್ ಕುಮಾರ್ ಮತ್ತು ಶಿವಕುಮಾರ್ ಹಾಗೂ ನಗರ ಯುವ ಮೋರ್ಚಾದ ಅಧ್ಯಕ್ಷರಾಗಿ ಸುಮನ್ ರವರನ್ನು ಆಯ್ಕೆಗೊಳಿಸಲಾಗಿದೆ ಎಂದು ತಾಲೂಕು ವಕ್ತಾರ ಕೆ.ಜಿ.ಮನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.