ಮಡಿಕೇರಿ, ಅ. 1: ಜಿ.ಪಂ., ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ, ನೇತಾಜಿ ಯುವಕ-ಯುವತಿ ಮಂಡಳಿ ತಾಳತ್ಮನೆ ಸಂಯುಕ್ತಾಶ್ರಯದಲ್ಲಿ ತಾ. 2 ರಂದು (ಇಂದು) ಹುಚ್ಚು ನಾಯಿ(ರೇಬಿಸ್) ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 10ರಿಂದ 12 ಗಂಟೆಯವರೆಗೆ ತಾಳತ್ಮನೆಯ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.