ಕೂಡಿಗೆ, ಅ. 1: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ. ರಾತ್ರಿ ಎಂಟು ಕಾಡಾನೆಗಳು ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ನಷ್ಟಪಡಿಸಿವೆ.

ಹುದುಗೂರು ಗ್ರಾಮದ ಜಮೀನಿಗೆ ರಾತ್ರಿ ಬೆಂಡೆಬೆಟ್ಟ ದಾರಿಯಲ್ಲಿ ಬಂದಿರುವ ಕಾಡಾನೆಗಳು ನದಿ ದಾಟಿ ರಾತ್ರಿಯಿಡಿ ಹುದುಗೂರು ಗ್ರಾಮದ ರೈತರ ಜಮೀನಿನಲ್ಲಿ ಬೆಳೆಸಲಾಗಿದ ಜೋಳ, ಬಾಳೆಗಿಡ, ತೆಂಗು, ಅಡಿಕೆ, ಕೆಸ, ಕಾಫಿಗಿಡ, ಭತ್ತದ ನಾಟಿ ಗದ್ದೆಗಳಿಗೆ ಹಾನಿ ಮಾಡಿವೆ.

ಈ ವ್ಯಾಪ್ತಿಯ ಕಾಳೇಗೌಡ, ಸ್ವಾಮಿ, ಪಾಂಡು, ಸುಶೀಲಮ್ಮ, ಚಂದ್ರು ಸೇರಿದಂತೆ ಅನೇಕ ರೈತರ ಜಮೀನುಗಳಿಗೆ ದಾಳಿ ಮಾಡಿ ನಷ್ಟಪಡಿಸಿವೆ. ಹುದುಗೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.