ಸೋಮವಾರಪೇಟೆ, ಅ.1: ಸಮಾಜ ಸೇವಕರಾಗಿದ್ದ ಪಟ್ಟಣದ ಉದ್ಯಮಿ ಬಿ.ಎಸ್.ಸದಾನಂದ್ ಅವರ ನಿಧನಕ್ಕೆ ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಸಂಘದ ಕಚೇರಿಯಲ್ಲಿ ಸಂತಾಪ ಸಭೆ ನಡೆಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಬಿ.ಎ.ಭಾಸ್ಕರ್ ಮಾತನಾಡಿ, ಸದಾನಂದ್ ಅವರು ವಿವಿಧ ಕ್ಷೇತ್ರದಲ್ಲಿ ಮಾಡಿದ ಸಮಾಜ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭ ಸಂಘದ ಪ್ರ. ಕಾರ್ಯದರ್ಶಿ ಇಂದಿರಾ ಮೋಣಪ್ಪ, ಖಜಾಂಚಿ ಎಂ.ಜಿ. ರಮೇಶ್, ಮಾಜಿ ಅಧ್ಯಕ್ಷ ಬಿ.ಆರ್. ಚಂದ್ರಹಾಸ್ ಹಾಗೂ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಕೊಡ್ಲಿಪೇಟೆಯಲ್ಲಿ ಸಂತಾಪ
ಸೋಮವಾರಪೇಟೆ : ಪಟ್ಟಣದ ಉದ್ಯಮಿ, ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ಬಿ.ಎಸ್. ಸದಾನಂದ್ ಅವರ ನಿಧನಕ್ಕೆ ಕೊಡ್ಲಿಪೇಟೆಯ ಹೇಮಾವತಿ ರೋಟರಿ ಸಂಸ್ಥೆಯಿಂದ ಸಂತಾಪ ಸಭೆ ನಡೆಯಿತು.
ಬೆಲ್ಲದ್ ಕಾಫಿ ಡಿಪೋ ವೀಡಿಯೋ ಹೌಸ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದಾನಂದ್ ಅವರ ಸಮಾಜ ಸೇವೆ, ಕೊಡ್ಲಿಪೇಟೆಯಲ್ಲಿ ರೋಟರಿ ಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಗ್ಗೆ ಸದಸ್ಯರುಗಳು ಸ್ಮರಿಸಿದರು.
ರೋಟರಿ ಅಧ್ಯಕ್ಷ ಹೆಚ್.ಎಂ. ದಿವಾಕರ್, ನಿಕಟಪೂರ್ವ ಅಧ್ಯಕ್ಷ ಪ್ರವೀಣ್, ಚೇಂಬರ್ ಸ್ಥಾನೀಯ ಸಮಿತಿ ಅಧ್ಯಕ್ಷ ಯತೀಶ್ಕುಮಾರ್, ಜಿಲ್ಲಾ ಸದಸ್ಯ ಸುಬ್ರಮಣಿ, ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ. ಯತೀಶ್, ರೋಟರಿ ಕಾರ್ಯದರ್ಶಿ ಅಮೃತ್ಕುಮಾರ್, ನಿಯೋಜಿತ ಅಧ್ಯಕ್ಷ ಡಿ.ವಿ. ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸೋಮವಾಪೇಟೆ ಕಸಾಪ: ಕಸಾಪ ಸದಸ್ಯರಾಗಿದ್ದ ಸದಾನಂದ್ ಹಾಗೂ ಹಿರಿಯ ಸಾಹಿತಿ ಡಾ. ಜಿ.ಎಸ್. ಅಮೂರ ಅವರುಗಳ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ, ಕಸಾಪ ಭವನದಲ್ಲಿ ಸಂತಾಪ ಸಭೆ ನಡೆಯಿತು. ಕಸಾಪ ಅಧ್ಯಕ್ಷ ಹೆಚ್.ಜೆ. ಜವರ, ಜಿಲ್ಲಾ ಕೋಶಾಧ್ಯಕ್ಷ ಎಸ್.ಎ. ಮುರುಳೀಧರ್, ತಾಲೂಕು ಕಾರ್ಯದರ್ಶಿ ಡಿ.ಪಿ. ಲೋಕೇಶ್, ಎಲ್.ಎಂ. ಪ್ರೇಮಾ, ತಾಲೂಕು ಕೋಶಾಧ್ಯಕ್ಷ ಎ.ಪಿ. ವೀರರಾಜು, ನಿರ್ದೇಶಕರುಗಳಾದ ನ.ಲ. ವಿಜಯ, ಸಿ.ಸಿ. ನಂದ, ಜೋಕಿಂ ವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.